ಪೆರಡಾಲ ಕ್ಷೇತ್ರದಲ್ಲಿ ವರಮಹಾಲಕ್ಷ್ಮೀ ಪೂಜೆ 12-08-2016

ಪೆರಡಾಲ, 12-08-2016:
ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರದಲ್ಲಿ ವರಮಹಾಲಕ್ಷ್ಮೀ ಪೂಜೆ ಶುಕ್ರವಾರ ಜರಗಿತು. ಕ್ಷೇತ್ರದ ಪ್ರಧಾನ ಅರ್ಚಕ ವೇದಮೂರ್ತಿ ಶಿವರಾಮ ಭಟ್ ಪೆರಡಾಲ ಪೂಜಾ ವಿಧಿವಿಧಾನಗಳನ್ನು ಪೂರೈಸಿದರು. ವಿದ್ವಾನ್ ಕೇಕಣಾಜೆ ಕೇಶವ ಭಟ್ ಪ್ರವಚನವನ್ನು ನಡೆಸಿಕೊಟ್ಟರು. ನೂರಾರು ಮಾತೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ “ತ್ರಿಶಂಕು ಸ್ವರ್ಗ” ಜರಗಿತು.

Varamahaklakshmi Pooja at Perdala Temple 12-8-2016 1

Varamahaklakshmi Pooja at Perdala Temple 12-8-2016 2