ಪೆರಡಾಲ ಕ್ಷೇತ್ರದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆ

ಪೆರಡಾಲ, 28-08-2015:
ಪೆರಡಾಲ ಶ್ರೀ ಉದನೇಶ್ವರ ಸೇವಾ ಸಮಿತಿ ವತಿಯಿಂದ ಶ್ರೀ ವರಮಹಾಲಕ್ಷ್ಮಿ ಪೂಜೆಯು ಶುಕ್ರವಾರ ಶ್ರೀ ಕ್ಷೇತ್ರದಲ್ಲಿ ನಡೆಯಿತು. ಮಾತೆಯರು ಭಕ್ತಿ ಶ್ರದ್ಧೆಯಿಂದ ಪಾಲ್ಗೊಂಡಿದ್ದರು. ವೇದಮೂರ್ತಿ ಶ್ರೀ ಗಿರೀಶ ಭಟ್ಟ ಕಡಗಂಜಿ ಅವರು ಪೂಜಾ ಕೈಂಕರ್ಯಗಳನ್ನು ನಡೆಸಿಕೊಟ್ಟರು.

ಓಣಂ ಹಬ್ಬದ ಅಂಗವಾಗಿ ಶ್ರೀ ಉದನೇಶ್ವರ ದೇವರ ಸನ್ನಿಧಿಯಲ್ಲಿ ರಚಿಸಿದ ಹೂವಿನ ರಂಗೋಲಿ ಭಕ್ತಾದಿಗಳ ಕಣ್ಮನ ಸೆಳೆದಿತ್ತು. ಊರ ಭಕ್ತಾದಿಗಳ ಸಹಕಾರದಿಂದ ಪುಷ್ಪ ರಂಗವಲ್ಲಿಯನ್ನು ರಚಿಸಲಾಯಿತು.

ಆಡಳಿತ ಮೊಕ್ತೇಸರ ವೆಂಕಟಕೃಷ್ಣ ಭಟ್, ಕೃಷಪ್ರಸಾದ ರೈ ಪಳ್ಳತ್ತಡ್ಕ, ಪ್ರಧಾನ ಅರ್ಚಕ ಶಿವರಾಮ ಭಟ್, ಬಾಲಸುಬ್ರಹ್ಮಣ್ಯ ಪೆರಡಾಲ, ಉದಯ ಪಟ್ಟಾಜೆ ಮುಂತಾದವರು ಉಪಸ್ಥಿತರಿದ್ದರು. ಪ್ರಸಾದ ಭೋಜನದ ನಂತರ ಪ್ರಸಿದ್ಧ ಕಲಾವಿದರಿಂದ ಶಾಂಭವೀ ವಿಲಾಸ ಯಕ್ಷಗಾನ ತಾಳಮದ್ದಳೆ ನಡೆಯಿತು.

Varamahalakshm Pooje at Peradala 28-8-2015 1

Varamahalakshm Pooje at Peradala 28-8-2015 2