ದೇವತ್ವಕ್ಕೆ ಸಾಗಬೇಕಾದರೆ ಭಾಗವತ ಸಪ್ತಾಹ ಬೇಕು – ವೇ|ಮೂ| ಕೇಶವ ಭಟ್

ಪೆರಡಾಲ ಭಾಗವತ ಸಪ್ತಾಹದ 6ನೇ ದಿನದ ಪ್ರವಚನ
ಪೆರಡಾಲ, 17-05-2016:
ಕಲಿಯುಗದಲ್ಲಿ ಭಕ್ತಿ ಮಾರ್ಗದ ಮೂಲಕ ಭಗವಂತನನ್ನು ಮೆಚ್ಚಿಸಬೇಕು. ಮನುಷ್ಯನು ದೇವತ್ವಕ್ಕೆ ಸಾಗಬೇಕಾದರೆ ಭಾಗವತ ಸಪ್ತಾಹ ಬೇಕು ಎಂದು ವೇದಮೂರ್ತಿ ಕೇಶವ ಭಟ್ ಕೇಕಣಾಜೆ ನುಡಿದರು.

ಅವರು ಮಂಗಳವಾರ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಭಾಗವತ ಸಪ್ತಾಹದ 6ನೇ ದಿನ ಕಥಾಪ್ರವಚನ ನಡೆಸಿಕೊಡುತ್ತಿದ್ದರು.

ಭಾಗವತ ಕಥಾಶ್ರವಣದಿಂದ ಅಜ್ಞಾನವು ದೂರವಾಗುತ್ತದೆ. ತನ್ನನ್ನು ತಾನು ದೇವರಿಗೆ ಸಮರ್ಪಿಸಿಕೊಂಡರೆ ಭಗವಂತನ ಸಾಮೀಪ್ಯವನ್ನು ಗಳಿಸಬಹುದು.  ಕಥಾಶ್ರವಣದಿಂದ ಐಶ್ವರ್ಯ, ರೋಗಶಾಂತಿ, ಧನಲಾಭ, ಕಾರ್ಯಸಿದ್ಧಿ ಪ್ರಾಪ್ತವಾಗುವುದು ಎಂದರು.

ಬೆಳಗ್ಗೆ ಶ್ರೀ ವಿಷ್ಣುಸಹಸ್ರನಾಮ ಪಾರಾಯಣ, ಸಾಮೂಹಿಕ ಪ್ರಾರ್ಥನೆ, ಅರ್ಚನೆ, ಶ್ರೀಮದ್ಭಾಗವತ ಪಾರಾಯಣ, ಶ್ರೀಕೃಷ್ಣ ಕಲ್ಪೋಕ್ತ ಪೂಜೆ ನಡೆಯಿತು. ಪಾರಾಯಣ ಭಾಗಗಳಾದ ಸ್ಯಮಂತಕೋಪಾಖ್ಯಾನ, ಬಾಣಾಸುರ ಪ್ರಕರಣ, ಜರಾಸಂಧ ವಧೆ, ಶಿಶುಪಾಲಾದಿಗಳ ವಧೆ, ಕುಚೇಲೋಪಾಖ್ಯಾನ, ಭೃಗುಲಾಂಛನ, ಯಧುವಂಶಕ್ಕೆ ಋಷಿಷಾಪ, ಶ್ರೀಕೃಷ್ಣ ನಿರ್ಯಾಣದ ಪೂರ್ವಸಿದ್ಧತೆ, ಹಂಸಾವತಾರ (ಹಂಸಾಖ್ಯಾನ)ವನ್ನು ಪ್ರಸ್ತುತಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಗಣೇಶ್ ಭಟ್ ಮುಣ್ಚಿಕ್ಕಾನ ಮುನ್ನಡೆಸುವ ಚಲಿಸುವ ಗೋಆಲಯದಲ್ಲಿ ಗೋವುಗಳಿಗೆ ಪೂಜೆಯನ್ನು ನೆರವೇರಿಸಲಾಯಿತು. ಅನೇಕ ಭಕ್ತರು ಗೋಮಾತೆಗೆ ಆರತಿಯನ್ನು ಬೆಳಗಿದರು.

Srimadbhagavatha Sapthaha Yajna 17-5-2016 1

Srimadbhagavatha Sapthaha Yajna 17-5-2016 2