ಪೆರಡಾಲದಲ್ಲಿ ಯಕ್ಷಗಾನ ಸಪ್ತಾಹ

ಪೆರಡಾಲ, 13-05-2016:
ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರದಲ್ಲಿ ನಡೆದುಬರುತ್ತಿರುವ ಭಾಗವತ ಸಪ್ತಾಹ ಕಾರ್ಯಕ್ರಮದಂಗವಾಗಿ ಭಾಗವತ ಪುರಾಣಾಧಾರಿತ ಯಕ್ಷಗಾನ ಸಪ್ತಾಹವು ಗುರುವಾರ ಆರಂಭಗೊಂಡಿತು. 19ನೇ ತಾರೀಕಿನ ತನಕ ರಾತ್ರಿ 8ರಿಂದ 12ರ ತನಕ ನುರಿತ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟವು ನಡೆಯಲಿರುವುದು. ಗುರುವಾರ ಎಡನೀರು ಶ್ರೀ ಗೋಪಾಲಕೃಷ್ಣ ಕೃಪಾಪೋಷಿತ ಯಕ್ಷಗಾನ ಮಂಡಳಿಯವರು ರಾಜಾ ಪರೀಕ್ಷಿತ-ವರಾಹಾವತಾರ ಎಂಬ ಕಥಾಭಾಗವು ಪ್ರದರ್ಶಿಸಲ್ಪಟ್ಟಿತು. ಪ್ರಖ್ಯಾತ ಪುಂಡುವೇಷಧಾರಿ ಶ್ರೀಧರ ಭಂಡಾರಿ ಪುತ್ತೂರು ಅವರು ಅತಿಥಿ ಕಲಾವಿದರಾಗಿ ಭಾಗವಹಿಸಿ ಶ್ರೀಕೃಷ್ಣನ ಪಾತ್ರದಲ್ಲಿ ಮಿಂಚಿದರು. ಮಾಧವ ತಲ್ಪಣಾಜೆ ವರಾಹನ ಪಾತ್ರದಲ್ಲಿ, ಸಂತೋಷ್ ಮಾನ್ಯ ಹಿರಣ್ಯಾಕ್ಷನ ಪಾತ್ರದಲ್ಲಿ ಜನಮನಸೂರೆಗೈದರು.

Perdala Yakshagana Sapthaha 12-5-2016 1

Perdala Yakshagana Sapthaha 12-5-2016 2

Perdala Yakshagana Sapthaha 12-5-2016 3

Perdala Yakshagana Sapthaha 12-5-2016 4