ಪೆರಡಾಲದಲ್ಲಿ ಶ್ರೀಮದ್ಭಾಗವತ ಸಪ್ತಾಹ ಯಜ್ಞ-ಆಮಂತ್ರಣ ಪತ್ರಿಕೆ ಬಿಡುಗಡೆ

ಬದಿಯಡ್ಕ, 27-03-2016:
ಪೆರಡಾಲ: ಕುಂಬಳೆ ಸೀಮೆಯ ಪ್ರಮುಖ ಕ್ಷೇತ್ರಗಳಲ್ಲೊಂದಾದ ಬದಿಯಡ್ಕ ಸಮೀಪದ ಪೆರಡಾಲ ಶ್ರೀ ಉದನೇಶ್ವರ ದೇವಾಲಯದಲ್ಲಿ ಶ್ರೀಮದ್ಭಾಗವತ ಸಪ್ತಾಹ ಯಜ್ಞವು ಹಾಗೂ ಶ್ರೀಮದ್ಭಾಗವತ ಪುರಾಣಾಧಾರಿತ ಯಕ್ಷಗಾನ ಬಯಲಾಟ ಸಪ್ತಾಹವು ಮೇ. 11ರಿಂದ 18ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.
ಪೂರ್ವಭಾವಿಯಾಗಿ ಶ್ರೀ ಉದನೇಶ್ವರ ಸೇವಾ ಸಮಿತಿಯ ಸಭೆಯು ಆದಿತ್ಯವಾರ ಶ್ರೀ ಕ್ಷೇತ್ರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಶಿವರಾಮಭಟ್ ಅವರು ದೇವರ ಸನ್ನಿಧಿಯಲ್ಲಿ ಪ್ರಾರ್ಥನೆಯನ್ನು ನೆರವೇರಿಸಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಆಡಳಿತ ಮೊಕ್ತೇಸರ ವೆಂಕಟಕೃಷ್ಣ ಮಕ್ಕಿಕ್ಕಾನ, ಜಯದೇವ ಖಂಡಿಗೆ,  ಶಿವರಾಮ ಪೆರ್ಮುಖ, ಗಂಗಾಧರ ಗೋಳಿಯಡ್ಕ, ಟಿ.ಕೆ.ನಾರಾಯಣ ಭಟ್ ಪಂಜಿತ್ತಡ್ಕ, ಜಗನ್ನಾಥ ರೈ ಪೆರಡಾಲ ಗುತ್ತು, ನೇಮಿರಾಜ ರೈ ಕೊಡಿಯಡ್ಕ, ಕ್ಷೇತ್ರದ ನೌಕರರು ಹಾಗೂ ಭಕ್ತ ಜನರು ಉಪಸ್ಥಿತರಿದ್ದರು.

Perdala Srimadbhagavatha Sapthaha Yajna